ಬಿರ್ಲಾ A1 ಓರಿಯಂಟ್ಗ್ರೀನ್ ಸಿಮೆಂಟ್ ಈಗ ಅತ್ಯಾವಶ್ಯಕವಾದುದು. ಇದನ್ನು ಅತಿ ಕಡಿಮೆ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಅತ್ಯಂತ ಕಾಳಜಿಯಿಂದ ತಯಾರಿಸಲ್ಪಟ್ಟಿದೆ. ಹಾಗಾಗಿ ಇದು ಪರಿಸರ-ಸ್ನೇಹಿ ಮತ್ತು ಭೂಗ್ರಹವನ್ನು ಉಳಿಸುವಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತಿದೆ.
ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) – ಗ್ರೀನ್ ಪ್ರಾಡಕ್ಟ್ಸ್ ಅಂಡ್ ಸರ್ವೀಸಸ್ ಕೌನ್ಸಿಲ್ ಅವರು ಓರಿಯಂಟ್ಗ್ರೀನ್ ಸಿಮೆಂಟ್ ಗೆ ‘ಗ್ರೀನ್ ಪ್ರೋ’ ಎಂಬ ಪ್ರಮಾಣಪತ್ರವನ್ನು ನೀಡಿದ್ದಾರೆ. ಓರಿಯಂಟ್ಗ್ರೀನ್ ಪರಿಸರದ ಮೇಲೆ ಕಡಿಮೆ ಪರಿಣಾಮವನ್ನುಂಟು ಮಾಡಿ ಪರಿಸರ ಸ್ನೇಹಿ ಕಟ್ಟಡಗಳನ್ನು ಗಣನೀಯವಾಗಿ ವರ್ಧಿಸಲು ಕೊಡುಗೆಯನ್ನು ನೀಡುತ್ತದೆ. ಇದರರ್ಥ ನೈಸರ್ಗಿಕ ಸಂಪನ್ಮೂಲಗಳನ್ನು ಸಂಪರ್ಕಿಸಲು ಇದು ಸಹಾಯ ಮಾಡುತ್ತಿದೆ ಮತ್ತು ಒಳಾಂಗಣ ಮತ್ತು ಹೊರಾಂಗಣದಲ್ಲಿ ಬದುಕಲು ಉತ್ತಮವಾದ ಪರಿಸರವನ್ನು ಒದಗಿಸುತ್ತದೆ.
ಹಾಗೂ ಇದು ಪರಿಸರ-ಸ್ನೇಹಿಗಿಂತ ಉತ್ತಮವಾದುದು. ಓರಿಯಂಟ್ಗ್ರೀನ್ ಸಿಮೆಂಟ್ ಅನ್ನು ಸಂಸ್ಕರಿದ ಖನಿಜ ಮಿಶ್ರಣದೊಂದಿಗೆ ಉನ್ನತ ಸಾಮರ್ಥ್ಯದ ಕ್ಲಿಂಕರ್ ಅನ್ನು ಪುಡಿ ಮಾಡುವ ಮೂಲಕ ವಿನ್ಯಾಸಗೊಳಿಸಲಾಗಿದೆ. ಇದು ಹೆಚ್ಚಿನ ಪ್ರತಿಕ್ರಿಯಾತ್ಮಕ ಸಿಲಿಕಾವನ್ನು ಹೊಂದಿರುತ್ತದೆ, ಇದು ದೀರ್ಘಕಾಲಿಕ ದೃಢತೆಯ ಲಾಭವನ್ನು ನೀಡುತ್ತದೆ. ಅತ್ಯುತ್ತಮವಾದ ರಾಸಾಯನಿಕ ಅಂಶಗಳು ಎಪ್ಲೋರೆಸೆನ್ಸ್ ಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತದೆ, ಏಕೆಂದರೆ ಕಟ್ಟಡ ರಚನೆಯಲ್ಲಿ ಯಾವುದೇ ಸೋರಿಕೆ ಅಥವಾ ಜಿನುಗುವಿಕೆಯಾಗದಂತೆ ಖಚಿತಪಡಿಸುತ್ತದೆ.
ಓರಿಯಂಟ್ಗ್ರೀನ್ ಸಿಮೆಂಟ್ ಗೋಳಾಕಾರದ ಸಿಮೆಂಟ್ ಕಣಗಳನ್ನು ಹೊಂದಿರುತ್ತದೆ, ಮತ್ತು ಅವು ಅಧಿಕ ಸೂಕ್ಷ್ಮತೆಯ ಮೌಲ್ಯವನ್ನು ಹೊಂದಿರುತ್ತವೆ. ಗೋಳಾಕಾರದಿಂದ ಕಾಂಕ್ರೀಟ್ ಹೆಚ್ಚು ಮುಕ್ತವಾಗಿ ಚಲಿಸುತ್ತದೆ ಮತ್ತು ಕಣಗಳ ಹೆಚ್ಚು ಸೂಕ್ಷ್ಮತೆಯು ರಂಧ್ರಗಳನ್ನು ಉತ್ತಮವಾಗಿ ಭರ್ತಿಮಾಡಲು ಅನುಮತಿಸುತ್ತದೆ, ಇದರಿಂದಾಗಿ ಉತ್ತಮ ಸೇರಿಕೆಕ ಉಂಟಾಗುತ್ತದೆ. ಓಪಿಸಿಯಿಂದ ಮಾಡಲಾದ ಕಾಂಕ್ರೀಟ್ ಗೆ ಹೋಲಿಸಿದಾಗ ಓರಿಯಂಟ್ಗ್ರೀನ್ ಸಿಮೆಂಟ್ ಕಾಂಕ್ರೀಟ್ ಉತ್ತಮ ಸ್ಲಂಪ್ ಅನ್ನು ಕಾಯ್ದುಕೊಳ್ಳುತ್ತದೆ, ವಿಶೇಷವಾಗಿ ಬೆಸಿಗೆಯಂತಹ ಹವಾಮಾನ ಪರಿಸ್ಥಿತಿಗಳಲ್ಲಿ.
ಓರಿಯಂಟ್ಗ್ರೀನ್ ಸಿಮೆಂಟ್ ಕಾಂಕ್ರೀಟ್ ಗಟ್ಟಿಯಾಗುವ ಸಮಯವನ್ನು ಹೆಚ್ಚಿಸುತ್ತದೆ, ಇದು ಕಾಂಕ್ರೀಟ್ ಅಥವಾ ಸಿಮೆಂಟ್ ಕಾಂಕ್ರೀಟ್ ನುಣುಪಾಗಿಸಲು ಮೇಸನ್ ಗೆ ಸಹಾಯ ಮಾಡುತ್ತದೆ. ಕಾಂಕ್ರೀಟ್ ಮಿಶ್ರಣದ ಸೇರುವಿಕೆಯು ಕಾಂಕ್ರೀಟ್ ನುಣುಪಾಗುವಿಕೆಗೆ ಕಾರಣವಾಗುತ್ತದೆ.
ಸ್ರವಿಕೆ ಎಂದರೆ ಒಂದು ರೀತಿಯ ಬೇರ್ಪಡಿಸುವಿಕೆಯಾಗಿರುತ್ತದೆ, ಇದರಲ್ಲಿ ಕಾಂಕ್ರೀಟ್ ಮಿಶ್ರಣದಲ್ಲಿರುವ ಸ್ವಲ್ಪ ನೀರು ಹೊಸದಾಗಿ ಹಾಕಿರುವಂತಹ ಕಾಂಕ್ರೀಟ್ ಮೇಲ್ಮೈಗೆ ಉಕ್ಕಿ ಬರುವ ಸಾಧ್ಯತೆ ಇರುತ್ತದೆ. ಸ್ರವಿಕೆಯಿಂದ ಮೇಲ್ಮೈ ಭಾಗ ಬಹಲ ಒದ್ದೆಯಾಗುತ್ತದೆ ಮತ್ತು ಕಾಂಕ್ರೀಟ್ ಸರಂಧ್ರ, ದುರ್ಬಲ ಮತ್ತು ಬಾಳಿಕೆಯಿಲ್ಲದಂತಾಗುತ್ತದೆ. ಓರಿಯಂಟ್ಗ್ರೀನ್ ಸಿಮೆಂಟ್ ಒಂದು ನಿರ್ದಿಷ್ಟ ಕಾರ್ಯಸಾಧ್ಯತೆಗಾಗಿ ಹೆಚ್ಚಿನ ಪರಿಮಾಣ ಮತ್ತು ಕಡಿಮೆ ನೀರಿನ ಅಂಶವನ್ನು ಒದಗಿಸುವ ಮೂಲಕ ಸ್ರವಿಕೆಯನ್ನು ಕಡಿಮೆ ಮಾಡುತ್ತದೆ. ಇದು ನೀರು ಸ್ರವಿಕೆಯ ಚಾನಲ್ಗಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ.
ಓರಿಯಂಟ್ಗ್ರೀನ್ ನಿಂದ ಮಾಡಲಾದ ಕಾಂಕ್ರೀಟ್ನಿಂದ ದೃಢತೆ ಮತ್ತು ದೃಢತೆಯ ಸಾಧನೆಯ ಪ್ರಮಾಣ 28 ದಿನಗಳಲ್ಲಿ ಸಾಧಾರಣ ಕಾಂಕ್ರೀಟ್ಗೆ ಸಮಾನವಾಗಿರುತ್ತದೆ. ಓರಿಯಂಟ್ಗ್ರೀನ್ ನ ಸಿಲಿಕೇಟ್ ರಚನೆಯು ಜಲಸಂಚಯನ ದರವು ನಿಧಾನಗೊಂಡ ನಂತರವೂ ಮುಂದುವರಿಯುತ್ತದೆ. ಇದರಿಂದಾಗಿ ನಂತರದ ವರ್ಷಗಳಲ್ಲಿ ಹೆಚ್ಚಿನ ದೃಢತೆಗೆ ಕಾರಣವಾಗುತ್ತದೆ. ಈ ಹೆಚ್ಚಿನ ಪ್ರಮಾಮದ ದೃಢತೆಯಿಂದಾಗಿ ಹಲವು ವರ್ಷಗಳ ಕಾಲ ಕಾಂಕ್ರೀಟ್ ನಿರಂತರವಾಗಿ ಬಲವಾಗುತ್ತಾ ಹೋಗುತ್ತದೆ.
ಉಕ್ಕಿಗೆ ಕಾಂಕ್ರೀಟ್ ನ ಬಂಧ ಅಥವಾ ಅಂಟಿಕೊಳ್ಳುವಿಕೆಯು ಕಾಂಕೀಟ್ ನೊಂದಿಗೆ ಉಕ್ಕು ಸ್ಪರ್ಶಿಸುವ ಪ್ರದೇಶ, ಬಲವರ್ಧನೆಯ ಆಳ ಮತ್ತು ಸಾಂದ್ರತೆಯ ಮೇಲೆ ಅವಲಂಬಿತವಾಗಿರುತ್ತದೆ. ಓರಿಯಂಟ್ಗ್ರೀನ್ ನ ಗುಣಲಕ್ಷಣ ನುಣುಪಾಗಿರುವುದರಿಂದ ಸಾಮಾನ್ಯವಾಗಿ ಪೇಸ್ಟ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಸ್ರವಿಕೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಸಂಪರ್ಕವು ಹೆಚ್ಚಾಗುತ್ತದೆ, ಇದು ಉಕ್ಕಿನೊಂದಿಗೆ ಸುಧಾರಿತ ಬಂಧಕ್ಕೆ ಕಾರಣವಾಗುತ್ತದೆ.
ಓರಿಯಂಟ್ಗ್ರೀನ್‌ನ ಜಲಸಂಚಯನವು ಸಾಮಾನ್ಯ ಸಿಮೆಂಟ್‌ನ ಜಲಸಂಚಯನಕ್ಕಿಂತ ನಿಧಾನವಾಗಿರುತ್ತದೆ, ಇದರ ಪರಿಣಾಮವಾಗಿ ನಿಧಾನವಾದ ಶಾಖ ಉತ್ಪಾದನೆ ಮತ್ತು ಕಾಂಕ್ರೀಟ್‌ನಲ್ಲಿ ಆಂತರಿಕ ಒತ್ತಡಗಳು ಕಡಿಮೆಯಾಗುತ್ತವೆ. ಹೀಗಾಗಿ ಓರಿಯಂಟ್ಗ್ರೀನ್ ಅಣೆಕಟ್ಟುಗಳು, ತಡೆಗೋಡೆಗಳು, ದೊಡ್ಡ ಅಡಿಪಾಯಗಳು ಇತ್ಯಾದಿಗಳಂತಹ ಸಾಮೂಹಿಕ ಕಾಂಕ್ರಿಟಿಂಗ್‌ಗೆ ಸೂಕ್ತವಾದ ಸಿಮೆಂಟ್ ಆಗಿರುತ್ತದೆ.
ಕಾಂಕ್ರೀಟ್‌ನಲ್ಲಿರುವ ಓರಿಯಂಟ್ಗ್ರೀನ್ ಒಣಗುವ ಶ್ರಿಂಕೇಜ್ ಮತ್ತು ಪ್ಲಾಸ್ಟಿಕ್ ಶ್ರಿಂಕೇಜ್ ಅನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಒಣಗುವ ಶ್ರಿಂಕೇಜ್ ಕಡಿಮೆ ಆಂತರಿಕ ಕಾಂಕ್ರೀಟ್ ಒತ್ತಡ ಮತ್ತು ನಿಧಾನವಾಗಿ ಉತ್ಪಾದನೆಯಾಗುವ ಶಾಖದಿಂದ ಕಡಿಮೆಯಾಗುತ್ತದೆ. ಪ್ಲಾಸ್ಟಿಕ್ ಶ್ರಿಂಕೇಜ್ ಕೂಡ ನಿರ್ದಿಷ್ಟ ಕುಸಿತದಲ್ಲಿ ಕಾಂಕ್ರೀಟ್ ಕಡಿಮೆ ಸ್ರವಿಕೆಯಿಂದ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಕಾಂಕ್ರೀಟ್ ಬಿರುಕು ನಿರೋಧಕವಾಗಿ ಮಾಡುತ್ತದೆ.
ಕಾಂಕ್ರೀಟ್ ಅಂತರ್‌ಸಂಪರ್ಕಿಸುವ ಖಾಲಿ ಸ್ಥಳಗಳನ್ನು ಹೊಂದಿದ್ದರೆ ಆಗ ಅದು ಪ್ರವೇಶಸಾಧ್ಯವಾಗುತ್ತದೆ. ಓರಿಯಂಟ್ಗ್ರೀನ್ ಕಾಂಕ್ರೀಟ್‌ನಲ್ಲಿ ಬಿಡುಗಡೆಯಾದ ಸುಣ್ಣವನ್ನು [Ca (OH)2 ಪ್ರತಿಕ್ರಿಯಾತ್ಮಕ ಸಿಲಿಕಾದಿಂದ ಬಳಸಲ್ಪಡುತ್ತದೆ ಮತ್ತು ಕಾಂಕ್ರೀಟ್ ಮೇಲ್ಮೈಯಲ್ಲಿ ಸೋರಿಕೆಯಾಗುವ ಬದಲು ಕರಗದ ಸಿಮೆಂಟ್ ಕಾಂಪೌಂಡ್ ನಿರ್ಮಿಸುತ್ತದೆ. ಇದು ಖಾಲಿ ಸ್ಥಳಗಳನ್ನು ಕಡಿಮೆ ಮಾಡಲು ಮತ್ತು ಕೆಪಿಲ್ಲರಿ ಚಾನಲ್‌ಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ ಮತ್ತು ತರುವಾಯ ಕಾಂಕ್ರೀಟ್‌ನ ಪ್ರವೇಶಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಕಾಂಕ್ರೀಟ್‌ನ ಬಾಳಿಕೆ ಹೆಚ್ಚಾಗುತ್ತದೆ.
ಓರಿಯಂಟ್ಗ್ರೀನ್ ರಾಸಾಯನಿಕ ದಾಳಿ ಮತ್ತು ಉಕ್ಕು ತುಕ್ಕುಹಿಡಿಯುವಿಕೆಗೆ ಅಧಿಕ ನಿರೋಧಕತೆಯನ್ನು ಹೊಂದಿದೆ. ಇದು ಕುಗ್ಗುವಿಕೆ ಮತ್ತು ಥರ್ಮಲ್ ಬಿರುಕುಗಳನ್ನು ಕೂಡ ಕಡಿಮೆ ಮಾಡುತ್ತದೆ, ಅಂತಿಮವಾಗಿ ಕಟ್ಟಡ ರಚನೆಯ ಜೀವಿತಾವಧಿಯನ್ನು ಹೆಚ್ಚಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.
“ಕಾಂಕ್ರೀಟ್ ಎಕ್ಸ್‌ಪರ್ಟ್” ಎಂಬುದು ನಮ್ಮ ಗ್ರಾಹಕರಿಗೆ ಒಂದು ವಿಶಿಷ್ಟವಾದ ಸೇವೆಯಾಗಿದೆ. ನಮ್ಮ ಹೆಚ್ಚು ಅನುಭವಿ ಟೆಕ್ನೋ-ಮಾರ್ಕೆಟಿಂಗ್ ತಂಡವು ನಿಮ್ಮ ಮನೆ ಬಾಗಿಲಲ್ಲಿಯೇ ಓರಿಯಂಟ್ಗ್ರೀನ್ ಸಿಮೆಂಟ್‌ನ ಅತ್ಯುತ್ತಮ ಗುಣಮಟ್ಟವನ್ನು ಪ್ರದರ್ಶಿಸಿ, ಮಾರ್ಗದರ್ಶನ ನೀಡಿ ಭರವಸೆ ನೀಡುತ್ತದೆ. ನಮ್ಮ ಮೊಬೈಲ್ ಕಾಂಕ್ರೀಟ್ ಇಂಜಿನಿಯರ್ ವ್ಯಾನ್‌ಗಳು ಅತ್ಯಾಧುನಿಕ ಉಪಕರಣಗಳೊಂದಿಗೆ ಸುಸಜ್ಜಿತವಾಗಿವೆ. ಬಳಸಿದ ಸಿಮೆಂಟ್‌ನ ಗುಣಮಟ್ಟವನ್ನು ಪರೀಕ್ಷಿಸಲು ಮತ್ತು ನಮ್ಮ ಪರಿಣಿತ ಸಿಬ್ಬಂದಿ ಮೂಲಕ ಆನ್‌ಸೈಟ್ ತಾಂತ್ರಿಕ ಸೇವೆಗಳನ್ನು ಒದಗಿಸಲು ವಿವಿಧ ವಿಧಾನಗಳ ಬಗ್ಗೆ ಶಿಕ್ಷಣ ನೀಡುತ್ತವೆ.