
ನಿಮ್ಮ ಕನಸಿನ ಮನೆಯು ಪೀಳಿಗೆಗಳ ವರಗೂ ಬಾಳಿಕೆ ಬರಬೇಕು
ಉತ್ತಮ ಗುಣಮಟ್ಟದ ಸಿಮೆಂಟ್ ಬಳಸಿರಿ
ಸಿಮೆಂಟ್ ಒಂದು ಅತ್ಯಂತ ಅವಶ್ಯಕ ಕಚ್ಚಾ ವಸ್ತು ಹಾಗೂ ನಿರ್ಮಾಣ ವೆಚ್ಚದ ಸರಿಸುಮಾರು 15% ಮೊತ್ತ ದಷ್ಟು ಇರುತ್ತದೆ. ಅದು ಮರಳು ಮತ್ತು ಕಲ್ಲು ಮಿಶ್ರಣವನ್ನು ಜೊತೆಗೂಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ, ಇದು ನಿಮ್ಮ ಮನೆಯ ಬುನಾದಿ, ಗೋಡೆಗಳು ಮತ್ತು ಚಾವಣಿಯನ್ನು ನಿರ್ಮಿಸುವಲ್ಲಿ ಉಪಯೋಗಿಸಲಾಗುತ್ತದೆ. ಹಾಗಾಗಿ, ಸಿಮೆಂಟಿನ ಬ್ರ್ಯಾಂಡ್ ಮತ್ತು ಬಗೆಯನ್ನು ಬುದ್ದಿವಂತಿಕೆಯಿಂದ ಆಯ್ಕೆ ಮಾಡಬೇಕು. ಉತ್ತಮ ಗುಣಮಟ್ಟದ ಸಿಮೆಂಟಿನ ಬಳಕೆ ಎಂದರೆ, ನಿಮ್ಮ ’ಕನಸಿನ ಮನೆಯ’ ದೀರ್ಘಾಯು ಮತ್ತು ಉತ್ತಮ ಬಾಳಿಕೆಯೆಂದು.
ಈ ಸೆಕ್ಷನ್ ವಿಭಾಗದಲ್ಲಿ ನಿಮಗೆ ಸಿಮೆಂಟಿನ ಬಗ್ಗೆ ಇರಬಹುದಾದ ಕೆಲವು ಮೂಲ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ ಹಾಗಾಗಿ ನೀವು ನಿಮ್ಮ ಮನೆಯ ನಿರ್ಮಾಣವನ್ನು ಪ್ರಾರಂಭಿಸುವಾಗ ಹೆಚ್ಚು ತಿಳುವಳಿಕೆಯುಳ್ಳ ಆಯ್ಕೆ ಮಾಡಬಹುದು. ಹಾಗೆಯೇ ನಿಮಗೆ ಆಸಕ್ತಿ ಇರಬಹುದಾದ ಗೃಹ ನಿರ್ಮಾಣದ ಇತರೆ ವಿವಿಧ ಅಂಶಗಳ ಮೇಲೆ ಹಲವಾರು ಲೇಖನಗಳು ಸಹ ನಮ್ಮ ಬಳಿ ಇವೆ.
-
ಮನೆಯ ನಿರ್ಮಾಣದಲ್ಲಿ ಯಾವ ಬಗೆಯ ಸಿಮೆಂಟನ್ನು ಬಳಸಬೇಕು?
ನಿರ್ಮಾಣದಲ್ಲಿ ಬಳಸುವ ಎರಡೂ ಸಾಮಾನ್ಯವಾದ ಸಿಮೆಂಟ್ ಗಳೆಂದರೆ ಆರ್ಡಿನರಿ, ಪೋರ್ಟ್ ಲ್ಯಾಂಡ್ ಸಿಮೆಂಟ್(ಒಪಿಸಿ) ಮತ್ತು ಪೋರ್ಟ್ ಲ್ಯಾಂಡ್ ಪೊಜ್ಜೊಲಾನ ಸಿಮೆಂಟ್ (ಪಿಪಿಸಿ).
ಹಾಗಿದ್ದರೂ ಪಿಪಿಸಿ ಸಿಮೆಂಟ್ ಗೃಹ ನಿರ್ಮಾಣಕ್ಕಾಗಿ ಬಹಳ ಸೂಕ್ತವಾದುದು ಮತ್ತು ವಿಶೇಷವಾಗಿ ಮುಖ್ಯ ಕಾರ್ಯಗಳಿಗೆ ಅಂದರೆ ಬುನಾದಿಗಳಿಗೆ, ಕಾಲಂಗಳಿಗೆ, ಮತ್ತು ಬೀಮ್ಸ್ ಹಾಗೂ ಸ್ಲ್ಯಾಬ್ ಗಳಿಗೆ.
-
ನನ್ನ ಮನೆ ನಿರ್ಮಾಣ ಅಗತ್ಯಗಳಿಗಾಗಿ ಬಿರ್ಲಾ A1 ಪ್ರೀಮಿಯಂ ಸಿಮೆಂಟ್ ಉತ್ತಮ ಏಕೆ?
ಕಾಂಕ್ರೀಟ್ ಕೆಮಿಕಲ್ಸ್ / ರಾಸಾಯನಗಳು ಮತ್ತು ನೀರಿ ನಿಂದ ದಾಳಿಗೆ ಒಳಗಾಗಬಹುದು. ಕ್ಲೋರೈಡ್ ಗಳು ರಚನೆಯು ಸ್ಥಿರವಾಗಿರಲು ಬಳಸುವ ಸ್ಟೀಲ್ ಬಾರುಗಳನ್ನು ಕೊರತ ಮಡುತ್ತದೆ ಅಂತೆಯೇ ಸಲ್ಫೇಟ್ ಗಳು ಕಾಂಕ್ರೀಟ್ ಅನ್ನೇ ದಾಳಿಮಾಡುತ್ತದೆ ಇದು ತಾನಾಗಿಯೇ ಸಹಜವಾಗಿ ತುಕ್ಕು, ಬಿರುಕು ಮತ್ತು ಸೋರಿಕೆಗೆ ಕಾರಣವಾಗುತ್ತದೆ. ಅದಾಗ್ಯೂ ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಅನ್ನು ನಿಖರವಾಗಿ ಹಾರುವ ಬೂದಿಯಿಂದ ಮತ್ತು ಪ್ರತಿಕ್ರಿಯಾಕಾರಿ ಸಿಲಿಕಾದೊಂದಿಗೆ ಸಂಸ್ಕರಿಸುವುದರೊಂದಿಗೆ ಸಕ್ಷಮಗೊಳಿಸಲಾಗಿದೆ ಇದು ಒಂದು ಭದ್ರತಾ ಜೆಲ್ ಅನ್ನು ರಚಿಸುತ್ತದೆ. ಹಾಗಾಗಿ ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಂದ ತಯಾರಿಸಿದ ಕಾಂಕ್ರೀಟ್ ಸವೆತ ಮತ್ತು ಸಲ್ಫೇಟ್ ನಿರೋಧಕವಾಗಿದೆ.
-
ಬಳಸಲಾಗುವ ಸಿಮೆಂಟಿನ ಗುಣಮಟ್ಟವನ್ನು ನಾನು ತೀರ್ಮಾನಿಸುವುದು ಹೇಗೆ?
ನೀವು ಈ ಕೆಳಗಿನ ಪರೀಕ್ಷೆಗಳನ್ನು ಮಾಡುವ ಮೂಲಕ ಸಿಮೆಂಟಿನ ಗುಣಮಟ್ಟವನ್ನು ತೀರ್ಮಾನಿಸಬಹುದು:
- ಚೀಲವನ್ನು ಬಿಚ್ಚಿ ಮತ್ತು ಸಿಮೆಂಟನ್ನು ಸರಿಯಾಗಿ ನೋಡಿ. ಅದರಲ್ಲಿ ಯಾವುದೇ ಗಂಟುಗಳು ಕಾಣಬಾರದು.
- ಸಿಮೆಂಟಿನ ಬಣ್ಣವು ಸಾಮಾನ್ಯವಾಗಿ ಹಸಿರು ಮಿಶ್ರಿತ ಬೂದು ಬಣ್ಣವಿರಬೇಕು.
- ನಿಮ್ಮ ಕೈಯನ್ನು ಸಿಮೆಂಟ್ ಚೀಲದ ಒಳಗೆ ತೂರಿಸಿ. ಅದು ಮುಟ್ಟಿದಾಗ ತಂಪಾದ ಅನುಭವ ನೀಡಬೇಕು. ಅಲ್ಲಿಯೂ ಸಹ ಗಂಟುಗಳಿರಬಾರದು.
- ಒಂದು ಚಿಟಿಕೆ ಸಿಮೆಂಟ್ ಅನ್ನು ಬೆರಳುಗಳಲ್ಲಿ ತೆಗೆದುಕೊಳ್ಳಿ ಮತ್ತು ಅದನ್ನು ಸ್ಪರ್ಷಿಸಿ. ಅದು ಸ್ಪರ್ಷಿಸಲು ಮೃಧುವಾಗಿರಬೇಕು ಹಾಗು ಮುಟ್ಟಲು ಗಟ್ಟಿಯಾಗಿರಬಾರದು.
- ಒಂದು ಹಿಡಿ ಸಿಮೆಂಟನ್ನು ತೆಗೆದುಕೊಂಡು ಒಂದು ಬಕೆಟ್ ನೀರಿನಲ್ಲಿ ಹಾಕಿ, ಕಣಗಳು ಮುಳುಗುವ ಮುನ್ನ ಸ್ವಲ್ಪ ಸಮಯ ತೇಲಬೇಕು.
ನಿರ್ಮಾಣದ ವಿವಿಧ ಹಂತಗಳು ಮತ್ತು ಅಂಶಗಳು ಯಾವುವು?- ಉತ್ಖನನ
- ಬುನಾದಿ
- ಕಾಲಂಗಳು, ಬೀಮ್ಸ್ ಮತ್ತು ಸ್ಲಾಬುಗಳು
- ಇಟ್ಟಿಗೆ ಕೆಲಸ
- ಪ್ಲಾಸ್ಟರಿಂಗ್
- ಫಿನಿಶಿಂಗ್