
ಸಮಯಕ್ಕೆ ಸರಿಯಾಗಿ ರಿಪೇರಿ
ಮಾಡುವುದು ಅವುಗಳನ್ನು ಪೀಳಿಗೆಗಳ ವರೆಗೂ ಬಾಳಿಕೆ ಬರುವಂತೆ ಮಾಡುತ್ತದೆ.
ನಿಮ್ಮ ಸ್ವಂತ ಮುದ್ದಿನ ಮನೆಯಲ್ಲಿ ವಾಸಿಸುವ ಆನಂದವನ್ನು ಬೇರಾವುದರೊಂದಿಗೂ ಹೋಲಿಸಲಾಗದು. ಇದನ್ನು ನಿರ್ಮಿಸಲು ನೀವು ತೆಗೆದುಕೊಂಡ ಪ್ರತಿ ಪರಿಶ್ರಮವು ಮೌಲ್ಯಯುತವಾದದ್ದು. ಕೆಲವು ಭದ್ರತಾ ಕ್ರಮಗಳ ಸಹಾಯದಿಂದ, ನೀವು ನಿಮ್ಮ ಮನೆಯನ್ನು, ಅದು ಇಂದು ಕಾಣುತ್ತಿರುವ ಹಾಗೆ ಹೊಸದಾಗಿ ಮತ್ತು ಸುಂದರವಾಗಿ ಉಳಿಯುತ್ತದೆ ಎಂದು ಖಚಿತವಾಗಿರಬಹುದು. ಮುಂಜಾಗ್ರತ ನಿರ್ವಹಣಾ ಖರ್ಚು ದೊಡ್ಡ ರಿಪೇರಿಗಳಿಗಿಂತ ಕಡಿಮೆ ವೆಚ್ಚದಲ್ಲಿರುತ್ತದೆ.
ನಿಮ್ಮ ಕುಟುಂಬ ಮತ್ತು ಅದೃಷ್ಟವು ಬೆಳೆದಂತೆಲ್ಲಾ ನೀವು ಹೆಚ್ಚುವರಿ ಕೊಠಡಿಗಳು ಅಥವಾ ಮಹಡಿಗಳನ್ನು ಸಹ ನಿರ್ಮಿಸಬಹುದು
ಈ ಸೆಕ್ಷನ್ ನಲ್ಲಿ ಮುಂಜಾಗ್ರತ ನಿರ್ವಹಣೆಯ ಮೇಲೆ ಕೆಲವು ಉಪಯುಕ್ತ ಸಲಹೆಗಳನ್ನು ಒದಗಿಸುತ್ತೇವೆ ಹಾಗೂ ಒಂದುವೇಳೆ ನಿಮ್ಮ ಪ್ರಸ್ತುತ ಮನೆಗೆ ಹೆಚ್ಚುವರಿ ನಿರ್ಮಾಣ ಮಾಡಲು ಯೋಜಿಸಿದಾಗ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತೇವೆ.
-
ನಾವು ಬಿರುಕುಗಳು ಮತ್ತು ಸೋರಿಕೆಗಳನ್ನು ಸರಿಪಡಿಸುವುದು ಹೇಗೆ?
ನಿರ್ಮಾಣದ ಸಮಯದಲ್ಲಿ ಸರಿಯದ ಸಮಯದ ವರೆಗೆ ಸಮರ್ಪಕ ಕ್ಯುರಿಂಗ್ ಮಾಡುವುದು ಪ್ರಾರಂಭಿಕ ಬಿರುಕುಗಳನ್ನು ಕಡಿಮೆಮಾಡುವ ಒಂದು ಸುಲಭ ಮಾರ್ಗ. ಹಾಗಿದ್ದರೂ ಸಹ ಕಾಲ ಕಳೆದಂತೆ ಬಿರುಕುಗಳು ಮತ್ತು ಸೋರಿಕೆಗಳು ಸಂಭವಿಸುತ್ತದೆ. ಸಣ್ಣ ಬಿರುಕುಗಳನ್ನು ಟಚ್ ಅಪ್ ಮತ್ತು ಪೇಯಿಂಟ್ ನಿಂದ ಸರಿಪಡಿಸಬಹುದು. ಇತರೆ ದೊಡ್ಡ ಬಿರುಕುಗಳಿಗೆ ಕುಶಲ ಗಾರೆ ಕೆಲಸದ ಅಗತ್ಯವಿರುತ್ತದೆ ಅವುಗಳೆಂದರೆ ಯಾವ ಮಟ್ಟದ ಹಾನಿಯಾಗಿದೆ ಎನ್ನುವುದರ ಮೇಲೆ ಸ್ಟಾಪಲಿಂಗ್, ಗನಿಟಿಂಘ್ ಅಥವಾ ಗ್ರೌಟಿಂಗ್ ಮಾಡಬಹುದು. ಅಂತಹ ಕೆಲಸಗಳನ್ನು ಮಾಡಿಸುವ ಮುನ್ನ ತಜ್ಞರನ್ನು ಸಮಾಲೋಚಿಸುವುದು ಅಗತ್ಯ.
-
ಗೋಡೆಗಳ ಮತ್ತು ಚಾವಣಿಯ ರಿ-ಸಿಮೆಂಟಿಂಗ್ ಗಾಗಿ ಯಾವ ಸಿಮೆಂಟ್ ಉತ್ತಮವಾದುದು?
ಗೋಡೆಗಳ ಮತ್ತು ಚಾವಣಿಯ ರಿ-ಸಿಮೆಂಟಿಂಗ್ ಗಾಗಿ ಪಿಪಿಸಿ ಸಿಮೆಂಟ್ ಅತ್ಯಂತ ಸೂಕ್ತವಾದುದು ಏಕೆಂದರೆ ಅದು ಅತಿ ಕಂಪ್ರೆಸ್ಸಿವ್ ಸ್ಟ್ರೆಂತ್ ಶಕ್ತಿಯನ್ನು ಹೊಂದಿದೆ.