
ಒಂದು ಬಲಿಷ್ಠವಾದ ಬುನಾದಿಯನ್ನು
ಗುಣಮಟ್ಟದ ಸಿಮೆಂಟ್ ಮತ್ತು ಅತ್ಯುತ್ತಮ ಕೆಲಸಗಾರಿಕೆಯಿಂದ
ನಿರ್ಮಿಸಲಾಗುತ್ತದೆ
ಒಂದು ಬಲಿಷ್ಠವಾದ ಬುನಾದಿಯು ನಿಮ್ಮ ಕನಸಿನ ಮನೆಯನ್ನು ನೆಲದ ಮೇಲೆ ಸ್ಥಿರವಾಗಿ ನಿಲ್ಲಿಸುತ್ತದೆ. ಇದು ತೇವಾಂಶದಿಂದ ದೂರವಿರಿಸುತ್ತದೆ, ಭೂಗತ ರಾಸಾಯನಿಕಗಳಿಂದ ಸವೆತವಾಗುವುದನ್ನು ನಿಯಂತ್ರಿಸುತ್ತದೆ ಮತ್ತು ಇದರ ಸುತ್ತಲಿನ ಭೂಮಿಯ ಚಲನೆಯನ್ನು ತಡೆಯುತ್ತದೆ ಹಾಗಾಗಿ ನಿಮ್ಮ ಕನಸಿನ ಮನೆಯು ಸ್ಥಿರವಾಗಿ ನಿಲ್ಲುತ್ತದೆ ಮತ್ತು ದೀರ್ಘಕಾಲದ ವೆರೆಗೂ ಬಾಳಿಕೆ ಬರುತ್ತದೆ.
ಈ ಸೆಕ್ಷನ್ ವಿಭಾಗದಲ್ಲಿ ಬುನಾದಿಯನ್ನು ಕೂರಿಸುವುದಕ್ಕಾಗಿ ಸಿಮೆಂಟನ್ನು ಆಯ್ಕೆ ಮಾಡುವ ಕೆಲವು ಮುಖ್ಯ ಪ್ರಶ್ನೆಗಳಿಗೆ ಉತ್ತರಿಸಲಿದ್ದೇವೆ ಹಾಗೂ ಕೆಲವು ಉತ್ತಮ ಬುನಾದಿ ನಿರ್ಮಾಣ ಅಭ್ಯಾಸಗಳನ್ನು ವಿವರಿಸುತ್ತೇವೆ ಅದು ಬುನಾದಿಯನ್ನು ಪೀಳಿಗೆಗಳ ವರೆಗೂ ಸ್ಥಿರವಾಗಿ ನಿಲ್ಲುವಂತೆ ಮಾಡುತ್ತದೆ.
ದಯಮಾಡಿ ಬುನಾದಿ ನಿರ್ಮಾಣದ ಮೇಲಿನ ಬಿರ್ಲಾ A1 ಹೋಂ ಬಿಲ್ಡಿಂಗ್ / ಗೃಹನಿರ್ಮಾಣ ವಿಡಿಯೋಗಳನ್ನು ವೀಕ್ಷಿಸಿ.
ಹಾಗೆಯೇ ನಿಮಗೆ ಆಸಕ್ತಿ ಇರಬಹುದಾದ ಗೃಹ ನಿರ್ಮಾಣದ ಇತರೆ ವಿವಿಧ ಅಂಶಗಳ ಮೇಲೆ ಹಲವಾರು ಲೇಖನಗಳು ಸಹ ನಮ್ಮ ಬಳಿ ಇವೆ.
-
ಒಂದು ಬಲಿಷ್ಠವಾದ ಬುನಾದಿಯನ್ನು ನಿರ್ಮಿಸುವಲ್ಲಿ ಸಿಮೆಂಟಿನ ಪಾತ್ರವೇನು?
ಒಂದು ದೃಡವಾದ ಸಂರಚನೆಯನ್ನು ಖಚಿತಪಡಿಸಲು ಒಂದು ಸ್ಥಿರವಾದ ಸ್ಥಿತಿಯಲ್ಲಿ ಬುನಾದಿ ನಿರ್ಮಾಣದಲ್ಲಿ ಬಳಸುವ ಎಲ್ಲಾ ನಿರ್ಮಾಣ ಸಾಮಗ್ರಿಗಳನ್ನು ಸಿಮೆಂಟ್ ಒಟ್ಟುಗೂಡಿಸುತ್ತದೆ ಉತ್ತಮ ಗುಣಮಟ್ಟದ ಸಿಮೆಂಟಿನ ಬಳಕೆ ಎಂದರೆ, ಶಕ್ತಿಯುತ ಮತ್ತು ಹೆಚ್ಚು ಬಾಳಿಕೆ ಬರುವ ಬುನಾದಿಯೆಂದು
-
ಯಾವ ಬಗೆಯ ಸಿಮೆಂಟ್ ಬುನಾದಿ ನಿರ್ಮಾಣಕ್ಕಾಗಿ ಉತ್ತಮವಾದುದು?
ಬುನಾದಿಯು ನಿರ್ಮಾಣದ ಅತಿಯಾದ ತೂಕವನ್ನು ಹೊರುತ್ತದೆ ಹಾಗಾಗಿ ಅದು ಬಲಿಷ್ಠವಾಗಿರುವುದು ಮತ್ತು ಬಾಳಿಕೆ ಬರಬೇಕಾದದ್ದು ಅತ್ಯಗತ್ಯ. ಪೋರ್ಟ್ ಲ್ಯಾಂಡ್ ಪೊಜ್ಜೊಲಾನ ಸಿಮೆಂಟ್ (ಪಿಪಿಸಿ) ಬಳಸಬೇಕಾದ ಒಂದು ಮಾದರಿಯ ಸಿಮೆಂಟಾಗಿದೆ ಏಕೆಂದರೆ ಅದು ನಿಧಾನವಾಗಿ ಹೈಡ್ರೇಟ್ ಆಗುತ್ತದೆ ಮತ್ತು ಉತ್ತಮವಾದ ಅಂತಿಮ ಬಲವನ್ನು ನೀಡುತ್ತದೆ.
-
ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಅನ್ನು ಬುನಾದಿ ನಿರ್ಮಾಣಕ್ಕಾಗಿ ಉತ್ತಮ ಎಂದು ಏಕೆ ಪರಿಗಣಿಸಲಾಗುತ್ತದೆ?
यಬಿರ್ಲಾ.ಎ1 ಪ್ರಿಮಿಯಂ ಸಿಮೆಂಟ್ ಅನ್ನು ಯುನಿಫಾರ್ಮ್ ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಷನ್ (ಯುಪಿಎಸ್‍ಡಿ) ಅನ್ನು ಖಾತರಿಪಡಿಸಲು ಅತ್ಯುತ್ತಮವಾದ ತಯಾರಿಕ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಇದರಿಂದ ಮಾಡಿದ ಕಾಂಕ್ರೀಟ್ ಏಕರೂಪವಾಗಿರುತ್ತದೆ, ಅತಿಹೆಚ್ಚು ಕಂಪ್ರೆಸ್ಸಿವ್ ಸ್ಟ್ರೆಂಥ್ ಶಕ್ತಿಯನ್ನು ಸಾಧಿಸುತ್ತದೆ ಮತ್ತು ಅತಿಹೆಚ್ಚು ಒತ್ತಡವನ್ನು ತಡೆಯುತ್ತದೆ. ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಂದ ತಯಾರಿಸಿದ ಕಾಂಕ್ರಿಟ್, ರಾಸಾಯನಿಕ, ಸಲ್ಫೇಟ್ ಮತ್ತು ಸವೆತಗಳ ನಿರೋಧಕವೂ ಸಹ ಆಗಿದೆ.